NCDIR Recruitment 2025: ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಉದ್ಯೋಗವಕಾಶ

Telegram Group Join Now
WhatsApp Group Join Now

ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NCDIR Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NCDIR Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (NCDIR)
  • ವೇತನ ಶ್ರೇಣಿ: 42,000 ರೂ. ತಿಂಗಳಿಗೆ
  • ಹುದ್ದೆಗಳ ಸಂಖ್ಯೆ: 03
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ಹುದ್ದೆಗಳ ವಿವರ:

  • ಯಂಗ್ ಪ್ರೊಫೆಷನಲ್-I: 01
  • ಯಂಗ್ ಪ್ರೊಫೆಷನಲ್-II (NLP– Software Developer): 01
  • ಯಂಗ್ ಪ್ರೊಫೆಷನಲ್-II (Statistics/Data Science): 01

ಶೈಕ್ಷಣಿಕ ಅರ್ಹತೆ:

NCDIR ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • ಯಂಗ್ ಪ್ರೊಫೆಷನಲ್-I: ಗ್ರಾಜುಯೇಷನ್
  • ಯಂಗ್ ಪ್ರೊಫೆಷನಲ್-II: ಪೋಸ್ಟ್ ಗ್ರಾಜುಯೇಷನ್

ವಯೋಮಿತಿ:

ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಈ ಕೆಳಗಿನ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು (02-ಜೂನ್-2025 ರಂತೆ):

  • ಯಂಗ್ ಪ್ರೊಫೆಷನಲ್-I: ಗರಿಷ್ಠ 35 ವರ್ಷ
  • ಯಂಗ್ ಪ್ರೊಫೆಷನಲ್-II: ಗರಿಷ್ಠ 40 ವರ್ಷ

ವಯೋಮಿತಿ ಸಡಿಲಿಕೆ:

  • OBC (NCL) ಅಭ್ಯರ್ಥಿಗಳು: 3 ವರ್ಷ
  • SC/ST ಅಭ್ಯರ್ಥಿಗಳು: 5 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ

ವೇತನ ಶ್ರೇಣಿ:

  • ಯಂಗ್ ಪ್ರೊಫೆಷನಲ್-I: 30,000 ರೂ. ತಿಂಗಳಿಗೆ
  • ಯಂಗ್ ಪ್ರೊಫೆಷನಲ್-II: 42,000 ರೂ. ತಿಂಗಳಿಗೆ

ಅರ್ಜಿ ಶುಲ್ಕ:

  • SC/ST/PwBD ಅಭ್ಯರ್ಥಿಗಳಿಗೆ: ಶೂನ್ಯ (ಯಾವುದೇ ಶುಲ್ಕವಿಲ್ಲ)
  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ಶೂನ್ಯ (ಯಾವುದೇ ಶುಲ್ಕವಿಲ್ಲ)
  • ಪಾವತಿ ವಿಧಾನ: ಅನ್ವಯವಾಗುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಇ-ಮೇಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಇ-ಮೇಲ್ ಐಡಿ [email protected] ಗೆ 02-ಜೂನ್-2025 ರ ಮುಂಚೆ ಕಳುಹಿಸಬೇಕು.

NCDIR Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-05-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-06-2025
  • ಸಂದರ್ಶನದ ದಿನಾಂಕ: 10-06-2025

ಪ್ರಮುಖ ಲಿಂಕ್‌ಗಳು:

ಅಂಗನವಾಡಿ ನೇಮಕಾತಿ 2025

ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನೇಮಕಾತಿ 2025

Leave a Comment

error: Content is protected !!