ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು (ನಗರ) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳು ನಿಗದಿತ ದಿನಾಂಕದಂದು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ.
DHFWS Bengaluru Urban Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಡಿಸ್ಟ್ರಿಕ್ಟ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿ ಬೆಂಗಳೂರು ಅರ್ಬನ್ (DHFWS)
- ವೇತನ ಶ್ರೇಣಿ: 60,000 ರೂ.
- ಹುದ್ದೆಗಳ ಸಂಖ್ಯೆ: 48
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ವಿವರ:
- ಮೆಡಿಕಲ್ ಆಫೀಸರ್: 19 ಹುದ್ದೆಗಳು
- ನರ್ಸಿಂಗ್ ಆಫೀಸರ್: 16 ಹುದ್ದೆಗಳು
- ಲ್ಯಾಬೊರೇಟರಿ ಟೆಕ್ನಿಷಿಯನ್: 13 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
DHFWS ಬೆಂಗಳೂರು ಅರ್ಬನ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ಮೆಡಿಕಲ್ ಆಫೀಸರ್: MBBS
- ನರ್ಸಿಂಗ್ ಆಫೀಸರ್: GNM, B.Sc (ನರ್ಸಿಂಗ್)
- ಲ್ಯಾಬೊರೇಟರಿ ಟೆಕ್ನಿಷಿಯನ್: 10ನೇ ತರಗತಿ, 12ನೇ ತರಗತಿ, ಲ್ಯಾಬ್ ಟೆಕ್ನಿಷಿಯನ್ ಡಿಪ್ಲೊಮಾ
ವಯೋಮಿತಿ: DHFWS ಬೆಂಗಳೂರು (ಅರ್ಬನ್) ಅಧಿಸೂಚನೆ ಪ್ರಕಾರ ಈ ಕೇಳಗಿನಂತಿದೆ.
- ಮೆಡಿಕಲ್ ಆಫೀಸರ್: ಗರಿಷ್ಠ 60 ವರ್ಷ
ನರ್ಸಿಂಗ್ ಆಫೀಸರ್ ಮತ್ತು ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ:
- ಸಾಮಾನ್ಯ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ
- 2A/2B/3A/3B ಅಭ್ಯರ್ಥಿಗಳು: ಗರಿಷ್ಠ 38 ವರ್ಷ
- SC/ST/Cat-I ಅಭ್ಯರ್ಥಿಗಳು: ಗರಿಷ್ಠ 40 ವರ್ಷ
DHFWS Bengaluru Urban Recruitment 2025 ವೇತನ ಶ್ರೇಣಿ:
- ಮೆಡಿಕಲ್ ಆಫೀಸರ್: ತಿಂಗಳಿಗೆ 60,000 ರೂ.
- ನರ್ಸಿಂಗ್ ಆಫೀಸರ್: ತಿಂಗಳಿಗೆ 18,714 ರೂ.
- ಲ್ಯಾಬೊರೇಟರಿ ಟೆಕ್ನಿಷಿಯನ್: ತಿಂಗಳಿಗೆ 16,515 ರೂ.
ವಾಕ್-ಇನ್ ಸಂದರ್ಶನ ಸ್ಥಳ ಮತ್ತು ದಿನಾಂಕ:
19 ಮೇ 2025 ರಂದು ಬೆಳಿಗ್ಗೆ 11:00 ಗಂಟೆಗೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೆಯ ಟಿಬಿ ಆಸ್ಪತ್ರೆ, ಹಳೆಯ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು-38 ಇಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
DHFWS Bengaluru Urban Recruitment 2025 ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 09-05-2025
- ವಾಕ್-ಇನ್ ಸಂದರ್ಶನ ದಿನಾಂಕ: 19-05-2025, ಬೆಳಿಗ್ಗೆ 11:00 ಗಂಟೆ
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್
- ಅಧಿಕೃತ ವೆಬ್ ಸೈಟ್: bengaluruurban.nic.in
ಇತರೆ ಮಾಹಿತಿಗಳನ್ನು ಓದಿ: