ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NCDIR Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
NCDIR Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (NCDIR)
- ವೇತನ ಶ್ರೇಣಿ: 42,000 ರೂ. ತಿಂಗಳಿಗೆ
- ಹುದ್ದೆಗಳ ಸಂಖ್ಯೆ: 03
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ವಿವರ:
- ಯಂಗ್ ಪ್ರೊಫೆಷನಲ್-I: 01
- ಯಂಗ್ ಪ್ರೊಫೆಷನಲ್-II (NLP– Software Developer): 01
- ಯಂಗ್ ಪ್ರೊಫೆಷನಲ್-II (Statistics/Data Science): 01
ಶೈಕ್ಷಣಿಕ ಅರ್ಹತೆ:
NCDIR ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ಯಂಗ್ ಪ್ರೊಫೆಷನಲ್-I: ಗ್ರಾಜುಯೇಷನ್
- ಯಂಗ್ ಪ್ರೊಫೆಷನಲ್-II: ಪೋಸ್ಟ್ ಗ್ರಾಜುಯೇಷನ್
ವಯೋಮಿತಿ:
ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಈ ಕೆಳಗಿನ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು (02-ಜೂನ್-2025 ರಂತೆ):
- ಯಂಗ್ ಪ್ರೊಫೆಷನಲ್-I: ಗರಿಷ್ಠ 35 ವರ್ಷ
- ಯಂಗ್ ಪ್ರೊಫೆಷನಲ್-II: ಗರಿಷ್ಠ 40 ವರ್ಷ
ವಯೋಮಿತಿ ಸಡಿಲಿಕೆ:
- OBC (NCL) ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD ಅಭ್ಯರ್ಥಿಗಳು: 10 ವರ್ಷ
ವೇತನ ಶ್ರೇಣಿ:
- ಯಂಗ್ ಪ್ರೊಫೆಷನಲ್-I: 30,000 ರೂ. ತಿಂಗಳಿಗೆ
- ಯಂಗ್ ಪ್ರೊಫೆಷನಲ್-II: 42,000 ರೂ. ತಿಂಗಳಿಗೆ
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳಿಗೆ: ಶೂನ್ಯ (ಯಾವುದೇ ಶುಲ್ಕವಿಲ್ಲ)
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ಶೂನ್ಯ (ಯಾವುದೇ ಶುಲ್ಕವಿಲ್ಲ)
- ಪಾವತಿ ವಿಧಾನ: ಅನ್ವಯವಾಗುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಇ-ಮೇಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಇ-ಮೇಲ್ ಐಡಿ [email protected] ಗೆ 02-ಜೂನ್-2025 ರ ಮುಂಚೆ ಕಳುಹಿಸಬೇಕು.
NCDIR Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-05-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-06-2025
- ಸಂದರ್ಶನದ ದಿನಾಂಕ: 10-06-2025
ಪ್ರಮುಖ ಲಿಂಕ್‌ಗಳು:
ಇತರೆ ಮಾಹಿತಿಗಳನ್ನು ಓದಿ: