ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿಗಾಗಿ ರೈಲ್ವೇ ನೇಮಕಾತಿ ಮಂಡಳಿಯು ಅಧಿಸೂಚನೆ (RRB ALP Recruitment 2025) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
RRB ALP Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ (RRB)
- ವೇತನ ಶ್ರೇಣಿ: 19,900 ರೂ. ರಿಂದ 35,000 ರೂ. ತಿಂಗಳಿಗೆ
- ಹುದ್ದೆಗಳ ಸಂಖ್ಯೆ: 9970
- ಉದ್ಯೋಗ ಸ್ಥಳ: ಅಖಿಲ ಭಾರತ
RRB ALP Recruitment 2025 ಶೈಕ್ಷಣಿಕ ಅರ್ಹತೆ:
RRB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:
- 10ನೇ ತರಗತಿ/SSLC ಜೊತೆಗೆ NCVT/SCVTನಿಂದ ಮಾನ್ಯತೆ ಪಡೆದ ITI (ಟ್ರೇಡ್‌ಗಳು: ಫಿಟ್ಟರ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕಾನಿಕ್, ಮಿಲ್‌ರೈಟ್/ಮೇಂಟೆನೆನ್ಸ್ ಮೆಕಾನಿಕ್, ಮೆಕಾನಿಕ್ (ರೇಡಿಯೋ & ಟಿವಿ), ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಮೆಕಾನಿಕ್ (ಮೋಟಾರ್ ವೆಹಿಕಲ್), ವೈರ್‌ಮನ್, ಟ್ರಾಕ್ಟರ್ ಮೆಕಾನಿಕ್, ಆರ್ಮೇಚರ್ & ಕಾಯಿಲ್ ವೈಂಡರ್, ಮೆಕಾನಿಕ್ (ಡೀಸೆಲ್), ಹೀಟ್ ಎಂಜಿನ್, ಟರ್ನರ್, ಮೆಕಾನಿಕ್ (ರಿಫ್ರಿಜರೇಷನ್ & ಏರ್-ಕಂಡಿಷನಿಂಗ್)), ಅಥವಾ
- 10ನೇ ತರಗತಿ/SSLC ಜೊತೆಗೆ ಮೇಲಿನ ಟ್ರೇಡ್‌ಗಳಲ್ಲಿ ಕೋರ್ಸ್ ಕಂಪ್ಲೀಟೆಡ್ ಆಕ್ಟ್ ಅಪ್ರೆಂಟಿಸ್‌ಶಿಪ್, ಅಥವಾ
- 3 ವರ್ಷದ ಡಿಪ್ಲೊಮಾ (ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್), ಅಥವಾ
- ಡಿಗ್ರಿ (ಮೇಲಿನ ಎಂಜಿನಿಯರಿಂಗ್ ಶಾಖೆಗಳಲ್ಲಿ).
ಹುದ್ದೆಗಳ ವಿವರ:
- ಸಹಾಯಕ ಲೋಕೋ ಪೈಲಟ್ (ALP): 9970 ಹುದ್ದೆಗಳು
ವೇತನ ಶ್ರೇಣಿ:
ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ ಅಧಿಸೂಚನೆಯ ಪ್ರಕಾರ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗೆ 19,900 ರೂ. ರಿಂದ 35,000 ರೂ. (7th Pay Level-2 ಮತ್ತು ಇತರೆ ಭತ್ಯೆಗಳು) ತಿಂಗಳಿಗೆ
ವಯೋಮಿತಿ:
RRB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು (01-ಜುಲೈ-2025 ರಂತೆ).
ವಯೋಮಿತಿ ಸಡಿಲಿಕೆ:
- OBC (NCL) ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- ಮಾಜಿ ಸೈನಿಕರು: UR/EWSಗೆ 3 ವರ್ಷ, OBC-NCLಗೆ 6 ವರ್ಷ, SC/STಗೆ 8 ವರ್ಷ
ಅರ್ಜಿ ಶುಲ್ಕ:
- SC/ST/ಮಾಜಿ ಸೈನಿಕರು/ಮಹಿಳೆ/ಟ್ರಾನ್ಸ್‌ಜೆಂಡರ್/EBC: ರೂ.250/- (CBT-1ಗೆ ಹಾಜರಾದ ನಂತರ ಸಂಪೂರ್ಣ ಮೊತ್ತ ಮರುಪಾವತಿ, ಬ್ಯಾಂಕ್ ಶುಲ್ಕ ತೆಗೆದು)
- ಸಾಮಾನ್ಯ ಅಭ್ಯರ್ಥಿಗಳು: ರೂ.500/- (CBT-1ಗೆ ಹಾಜರಾದ ನಂತರ ರೂ.400/- ಮರುಪಾವತಿ, ಬ್ಯಾಂಕ್ ಶುಲ್ಕ ತೆಗೆದು)
- ತಿದ್ದುಪಡಿ ಶುಲ್ಕ: ರೂ.250/- (ಮರುಪಾವತಿಸಲಾಗದು)
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-04-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-05-2025 (ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ)
RRB ALP Recruitment 2025 ಪ್ರಮುಖ ಲಿಂಕ್‌ಗಳು:
- ದಿನಾಂಕ ವಿಸ್ತರಣೆ ಅಧಿಸೂಚನೆ: ಡೌನ್ಲೋಡ್
- ಅಧಿಸೂಚನೆ: ಡೌನ್ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: indianrailways.gov.in
ಇತರೆ ಮಾಹಿತಿಗಳನ್ನು ಓದಿ: